ಹಾಸನ ಹೊಸಳ್ಳಿ ಬಳಿ ಗಣಪತಿ ಮೆರವಣಿಗೆಯಲ್ಲಿ ಗೂಡ್ಸ್ ಲಾರಿ ಹರಿದು 9 ಮಂದಿ ಸಾವನ್ನಪ್ಪಿರುವ ಪ್ರಕರಣ ನಡೆದಿದೆ. ಈ ಭೀಕರ ಅಪಘಾತ ಪ್ರಕರಣದಲ್ಲಿ ಹೊಸದುರ್ಗ ಮೂಲದ ಒರ್ವ ಇಂಜಿನಿಯರಿಂಗ್ ವಿಧ್ಯಾರ್ಥಿ ಸಾವನ್ನಪ್ಪಿದ್ದಾನೆ. ತಾಲ್ಲೂಕಿನ ಗವಿರಂಗನಾಥಪುರ ಗ್ರಾಮದ ಯುವಕ ಮಿಥುನ್ ಧಾರುಣವಾಗಿ ಸಾವನ್ನಪ್ಪಿದ್ದಾನೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಗವಿರಂಗನಾಥಪುರ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಗವಿರಂಗನಾಥಪುರದ ಮಿಥುನ್ (20) ಇಂಜಿನಿಯರಿಂಗ್ ವಿಧ್ಯಾರ್ಥಿ ಸಾವನ್ನಪ್ಪಿದ್ದಾನೆ. ಹಾಸನ ಇಂಜಿನಿಯರಿಂಗ್ ಕಾಲೇಜಲ್ಲಿ ಮಿಥುನ್ ವ್ಯಾಸಂಗ ಮಾಡುತ್ತಿದ್ದ. ಮಿಥನ್ ಜೊತೆ ತೆರಳಿದ್ದ ಮೂವರು ಸ್ನೇಹಿತರು ಕೂಡಾ ಸಾವನ್ನಪ್ಪಿದ್ದಾರೆ.