ಉಡುಪಿ ನಗರ ಸಭೆ ಸತ್ಯಮೂರ್ತಿ ಸ್ಮಾರಕ ಸಭಾಭವನದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಶಾಸಕಾ ಸುವರ್ಣ ಭಾಗವಹಿಸಿ ನಗರದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಾಮಾನ್ಯ ಸಭೆಯಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅಂಗಡಿ, ಹೊಟೇಲ್, ಮಳಿಗೆಗಳ ವ್ಯಾಪಾರ ವಹಿವಾಟಿಗೆ ರಾತ್ರಿ 11 ಗಂಟೆ ವರೆಗೆ ಅವಕಾಶ, ಮಳೆಯಿಂದ ಹದಗೆಟ್ಟಿರುವ ರಸ್ತೆಗಳ ನಿರ್ವಹಣೆ, ಇ ಖಾತಾ ವಿತರಣೆ, ಮಲ್ಪೆ ಬೀಚ್ ಸ್ವಚ್ಛತೆ, ದಾರಿದೀಪ, ರಾಷ್ಟೀಯ ಹೆದ್ದಾರಿ ಪರ್ಕಳ ಹಾಗೂ ಇಂದ್ರಾಳಿ ಸೇತುವೆ ಕಾಮಗಾರಿ ಮೊದಲಾದ ವಿಷಯಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿದು ಬಂದಿದೆ.