ಮಳವಳ್ಳಿ : ತಾಲೂಕಿನ ಎಂ ಆಲದಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಬುಧವಾರ ಏರ್ಪಾಡಾಗಿತ್ತು. ಸಾಯಂಕಾಲ 4 ಗಂಟೆ ಸಮಯದಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮನ್ ಮುಲ್ ನಿರ್ಧೇಶಕರಾದ ಕೃಷ್ಣೇಗೌಡ ಅವರು ಜಿಲ್ಲೆಯಲ್ಲಿ ಹಿಂದೆ ಪ್ರತಿ ದಿನ 7 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದು ಪ್ರಸ್ತುತ 11 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು ಈ ಎಲ್ಲಾ ಹಾಲನ್ನು ದೆಹಲಿ ಸೇರಿದಂತೆ ಇತರೆ ರಾಜ್ಯಗಳಲ್ಲಿ ಮಾರಾಟ ಮಾಡಲು ಕ್ರಮ ವಹಿಸಲಾಗಿದೆ ಎಂದರು. ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರ ಸಹಕಾರದಿಂದ ಮನ್ ಮುಲ್ ಹಾಗೂ ಸರ್ಕಾರದ ವತಿಯಿಂದ ಹಾಲು ಉತ್ಪಾದಕರಿಗೆ ದೊರಕುವ ಸೌಲಭ್ಯಗಳನ್ನು ಎಲ್ಲಾ ಹಾಲು ಉತ್ಪಾದಕರಿಗೆ ತಲುಪಿಸುವುದಾಗಿ ತಿಳಿಸಿದರು.