ದಾವಣಗೆರೆ ನಗರದ ಪಾರ್ಕ್ ಒಂದರಲ್ಲಿ ಜೋಡಿ ಒಂದು ಪರಸ್ಪರ ಹೊಡೆದಾಡಿಕೊಂಡ ಘಟನೆ ಬುಧವಾರ ಸಂಜೆ 4 ಗಂಟೆಗೆ ನಡೆದಿದೆ. ದಾವಣಗೆರೆ ನಗರದ ಶಾಮನೂರು ರಸ್ತೆಯ ಟ್ಯಾಂಕ್ ಪಾರ್ಕ್ನಲ್ಲಿ ಈ ಘಟನೆ ನಡೆದಿದೆ. ಹುಬ್ಬಳ್ಳಿ ಮೂಲಕ ವ್ಯಕ್ತಿ ಹಾಗೂ ಹರಪನಹಳ್ಳಿ ಮೂಲದ ಮಹಿಳೆ ಪರಸ್ಪರ ಹೊಡೆದಾಡಿಕೊಂಡ ಜೋಡಿ. ಮಹಿಳೆ ಈತನ ನಂಬಿ ಪತಿಯಿಂದ ಪ್ರತ್ಯೇಕವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿದ್ದಳು. ಆದರೆ ಈತ ಚಿನ್ನ ಹಾಗೂ ಹಣ ಪಡೆದು ಈಗ ಉಲ್ಟಾ ಹೊಡೆದಿದ್ದಾನೆ ಎಂಬ ಕಾರಣಕ್ಕೆ ಜಗಳ ನಡೆದಿದೆ ಎಂದು ಹೇಳಲಾಗಿದೆ. ಕಾರಣ ಅಸ್ಪಷ್ಟವಾಗಿದ್ದು, ಜೋಡಿ ಹೊಡೆದಾಡಿಕೊಂಡ ಘಟನೆಯ ವಿಡಿಯೋ ವೈರಲ್ ಆಗಿದೆ.