ಹನೂರು ತಾಲ್ಲೂಕಿನ ಎಂ.ಟಿ. ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 2.568 ಕೆಜಿ ಒಣ ಗಾಂಜಾವನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದು, ಸಂಬಂಧಿಸಿದ ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ. ಬಂಧಿತನನ್ನು ಎಂ.ಟಿ. ದೊಡ್ಡಿ ಗ್ರಾಮದ ವೆಂಕಟರಮಣಗೌಡ (53) ಎಂದು ಗುರುತಿಸಲಾಗಿದೆ. ಈತ ತನ್ನ ಜಮೀನಿನ ಮನೆಯಲ್ಲಿ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಿರುವುದಾಗಿ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ, ಅಬಕಾರಿ ಪೊಲೀಸರು ಸ್ಥಳದಲ್ಲಿ ಧಾಳಿ ನಡೆಸಿದರು. ಕೊಳ್ಳೇಗಾಲ ವಲಯದ ಅಬಕಾರಿ ನಿರೀಕ್ಷಕ ದಯಾನಂದ ಸಿ.ಎಂ. ಅವರ ಮಾರ್ಗದರ್ಶನದಡಿ, ಉಪ ನಿರೀಕ್ಷಕ ಶ್ರೀಧರ್ ಡಿ. ನೇತೃತ್ವದಲ್ಲಿ, ಡ ಕಾರ್ಯಾಚರಣೆ ನಡೆಯುತ್ತಿದಾಗ ಈ ಘಟನೆ ಬೆಳಕಿಗೆ ಬಂದಿದೆ