ಬುದ್ಧರ ಶಿರಚ್ಚೆದ ಖಂಡಿಸಿ ದ ಸ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಭೆ " ಆಂಧ್ರ ರಾಜ್ಯದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಸಮೀಪದ ಬುದ್ಧರ ಬೆಟ್ಟದಲ್ಲಿರುವ ಭಗವಾನ್ ಬುದ್ಧರ ಪ್ರತಿಮೆಯ ಶಿರಚ್ಚೆದ ಘಟನಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಶ್ರೀನಿವಾಸಪುರ ತಾಲ್ಲೂಕಿನ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಭೆಯನ್ನು ತಾಲ್ಲೂಕು ಕಚೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಕಳೆದ ತಿಂಗಳ ಹುಣ್ಣಿಮೆ ದಿನದಂದು ಭಗವಾನ್ ಬುದ್ಧರ ಬೆಟ್ಟದಲ್ಲಿ ಬುದ್ಧಿರ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಾರತೀಯ ಅಂಬೇಡ್ಕರ್ ಸೇನೆಯ ರಾಜ್ಯಧ್ಯಕ್ಷ ಪಿ ಟಿ ಎಂ ಶಿವಪ್ರಸಾದ್ ಎಂಬುವವರ ನೇತೃತ್ವ