ಕಲಬುರಗಿ : ಕಲಬುರಗಿ ಜಿಲ್ಲೆಯಾದ್ಯಂತ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚು ಮಳೆಯಾಗುತ್ತಿದ್ದು, ಜಿಲ್ಲೆಯ ಕಾಳಗಿ ತಾಲೂಕಿನ ಅಂತರ್ಜಲ ಹೆಚ್ಚಾಗಿದೆ.. ಪರಿಣಾಮ ರಾಯಕೋಡ ಗ್ರಾಮದ ಬಳಿ ಬೋರವೆಲ್‌ನಿಂದ ನೀರು ಉಕ್ಕಿ ಉಕ್ಕಿ ಹೊರ ಬರ್ತಿವೆ.. ಆಗಷ್ಟ್ 17 ರಂದು ಮಧ್ಯಾನ 2 ಗಂಟೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.. ಕಳೆದ ಅನೇಕ ದಿನಗಳಿಂದ ಚಿಂಚೋಳಿ ಮತ್ತು ಕಾಳಗಿ ತಾಲೂಕಿನಲ್ಲಿ ಮಳೆ ಪ್ರಮಾಣ ಹೆಚ್ಚಳವಾದ ಹಿನ್ನಲೆಯಲ್ಲಿ ರಾಯಕೋಡ್ ಮತ್ತು ಕೇಶ್ವಾರ್ ಗ್ರಾಮದ ಮಧ್ಯೆ ಇರೋ ಬೋರವೆಲ್‌ನಿಂದ ನೀರು ಉಕ್ಕಿ ಉಕ್ಕಿ ಹೊರಬರ್ತಿವೆ..