ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಪಶು ಆಸ್ಪತ್ರೆಯಲ್ಲಿ ಹುಚ್ಚು ನಾಯಿ ರೋಗ ವಿರುದ್ದ ಹಮ್ಮಿಕೊಂಡ ಲಸಿಕಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಜಿ.ಪಂ ಸಿಇಓ ಶಶಿಧರ ಕುರೇರ ಚಾಲನೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಸಂಗಪ್ಪ ಅವರು ರೇಬಿಸ್ ರೋಗವು ಮಾರಣಾಂತಿಕ ರೋಗವಾಗಿದ್ದು ಹುಚ್ಚು ಪ್ರಾಣಿಗಳ ಕಡಿತದಿಂದ ಲಿಸ್ಸಾ ಎಂಬ ವೈರಾಣುವಿನಿಂದ ಹರಡುವ ಮಾರಣಾಂತಿಕ ರೋಗವಾಗಿದ್ದು ಒಮ್ಮೆ ರೋಗ ಬಂದರೆ ಸಾವು ಖಚಿತ ಎಂದರು.