ಕೊರಟಗೆರೆ ತಾಲೂಕಿನ ತೀತಾ ಶಾಖೆಯ ಬೆಸ್ಕಾಂ ಜೂನಿಯರ್ ಇಂಜಿನಿಯರ್ ಮೇಲಿನ ಭ್ರಷ್ಟಾಚಾರ ಆರೋಪ ಸಾಭೀತಾದ ಹಿನ್ನೆಲೆ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗೂ ರೂ.10 ಸಾವಿರ ದಂಡ ವಿಧಿಸಿ ತುಮಕೂರು ನಗರದ ನ್ಯಾಯಾಲಯ ತೀರ್ಪು ನೀಡಿದೆ. 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಾಸ್ಮಿನಾ ಪರ್ವಿನ್ ಲಾಡಖಾನ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ. ಕೊರಟಗೆರೆ ತಾಲೂಕಿನ ತೀತಾ ಅಂಚೆ ಕೆಂಗನಪಾಳ್ಯ ಗ್ರಾಮದ ಟಿ ಎಂ.ರಾಘವೇಂದ್ರ ಬಿನ್ ಮಂಜುನಾಥ್ ಅವರು 2/5ಎ ಸರ್ವೇ ನಂಬರ್ ನ ತಮ್ಮ ಜಮೀನಿನಲ್ಲಿ ಟಿಸಿ ಸುಟ್ಟು ಹೋಗಿದ್ದ ಇದರ ಬದಲಾವಣೆಗಾಗಿ ಬೆಸ್ಕಾಂ ಕಚೇರಿ ಅರ್ಜಿ ಸಲ್ಲಿಸಿದ್ದರು.ಇದಕ್ಕಾಗಿ ಬೆಸ್ಕಾಂ ಜೂನಿಯರ್ ಇಂಜಿನಿಯರ್ ಮೊಹಮ್ಮದ್ ರಫಿ 10 ಸಾವಿರ ರೂ. ಲಂಚ ಕೇಳಿದ್ದರು.