ಸಾರ್ವಜನಿಕ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ನಗರದಲ್ಲಿ ಪೊಲೀಸರಿಂದ ರೂಟ್ ಮಾರ್ಚ್ ಬೆಳಗಾವಿ ನಗರದಲ್ಲಿ ಇಂದು ಬುಧುವಾರ 2 ಗಂಟೆಗೆ ಅತೀ ಅದ್ದೂರಿಯಾಗಿ ಗಣೇಶ ಚತುರ್ಥಿ ಆಚರಣೆ ಹಿನ್ನಲೆ ಯಾವುದೇ ಅಹಿತಕರ ಘಟನೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ರ್ಯಾಪಿಡ್ ಆ್ಯಕ್ಷನ್ ಫೋರ್ಸ (ಆರ್‌ಎಎಫ್) ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಂದ ಪಥಸಂಚಲನ (ರೂಟ್ ಮಾರ್ಚ)ವನ್ನು ಕೈಗೊಳ್ಳಲಾಯಿತು. ಈ ಪಥಸಂಚನಲವು ಚನ್ನಮ್ಮ ವೃತ್ತದಿಂದ ಪ್ರಾರಂಭವಾಗಿ ಚವಾಟಗಲ್ಲಿ, ಶೆಟ್ಟಿ ಗಲ್ಲಿ, ಶಾಸ್ತ್ರಿ ಚೌಕ,ದರ್ಬಾರ ಗಲ್ಲ, ಖಡೇಬಜಾರ,ಜಾಲಗಾರ ಗಲ್ಲಿ, ಖಡಕ ಗಲ್ಲಿ ಮೂಲಕ ಮಾರ್ಕೆಟ ಪೊಲೀಸ್ ಠಾಣೆ ಬಳಿ ನಡೆಯಿತು.