ಶಿರಸಿ : ತಾಲೂಕಿನ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ ಗಣೇಶ ಚತುರ್ಥಿಯನ್ನು ಶ್ರದ್ಧಾಭಕ್ತಿಯಿಂದ ಬುಧವಾರ ಆಚರಿಸಲಾಯಿತು. ಉಭಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಗಣಹವನ ನಡೆಯಿತು. ಎರಡು ಮಣ್ಣಿನ ಗಣಪತಿ ಮೂರ್ತಿಗಳನ್ನು ಪೂಜಿಸಿ, ಆರಾಧಿಸಲಾಯಿತು. ಶ್ರೀ ಮಠದ ಆರಾಧ್ಯ ದೇವರುಗಳಲ್ಲಿ ಒಂದಾದ ರತ್ನಗರ್ಭ ಗಣಪತಿಗೆ ಕಲ್ಪೋಕ್ತ ಪೂಜೆ, ಮಹಾಮಂಗಳಾರತಿಯನ್ನೂ ಬುಧವಾರ ಮಧ್ಯಾಹ್ನ 1.00 ಗಂಟೆ ಸುಮಾರಿಗೆ ನೆರವೇರಿಸಿದರು.