Download Now Banner

This browser does not support the video element.

ಯಾದಗಿರಿ: ಮುದ್ನಾಳ ಗ್ರಾಮದಲ್ಲಿ ಹಾಳಾಗಿರುವ ರಸ್ತೆಗಳ ದುರಸ್ತಿಗೊಳಿಸುವಂತೆ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಒತ್ತಾಯ

Yadgir, Yadgir | Sep 3, 2025
ಯಾದಗಿರಿ ತಾಲೂಕಿನ ಹಾಗೂ ಯಾದಗಿರಿ ನಗರದಿಂದ ಎರಡೇ ಕಿಲೋಮೀಟರ್ ದೂರದಲ್ಲಿರುವ ಮುದ್ನಾಳ ಗ್ರಾಮದಲ್ಲಿನ ರಸ್ತೆಗಳು ಹಾಳಾಗಿದ್ದು ಕೂಡಲೇ ದುರಸ್ತಿಗೊಳಿಸುವಂತೆ ಸಾಮಾಜಿಕ ಹೋರಾಟಗಾರ ಉಮೇಶ ಮುದ್ನಾಳ ಒತ್ತಾಯಿಸಿದ್ದಾರೆ.ಬುಧವಾರ ಮಧ್ಯಾನ ಮುದ್ನಾಳ ಗ್ರಾಮದಲ್ಲಿ ಈ ಕುರಿತು ಮಾತನಾಡಿ, ಜಿಲ್ಲೆಯಲ್ಲಿ ಈ ಗ್ರಾಮದಿಂದ ಅತಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ ಆದರೆ ಅಭಿವೃದ್ಧಿ ಮಾತ್ರ ಆಗಿಲ್ಲ ಇದಕ್ಕೆ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ.ಆದ್ದರಿಂದ ಅವರ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
Read More News
T & CPrivacy PolicyContact Us