ಮಳವಳ್ಳಿ : ವ್ಯಕ್ತಿಯೊಬ್ಬನ ತಲೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ ದುಷ್ಕೃತ್ಯವೊಂದು ತಾಲ್ಲೂಕಿನ ಹಲಗೂರಿನಲ್ಲಿ ಜರುಗಿದೆ. ಹತ್ಯಗೀಡಾದ ವ್ಯಕ್ತಿಯನ್ನು ಮೈಸೂರಿನ ಅರವಿಂದ ನಗರದ ವಾಸಿ 34 ವರ್ಷದ ಆರ್ ರಮೇಶ್ ಎಂದು ಗುರುತಿಸಲಾಗಿದೆ. ಕೆಲ ವರ್ಷಗಳಿಂದ ಹಲಗೂರಿನಲ್ಲಿ ವಾಸವಿದ್ದ ಈತ ಪ್ರಾರಂಭದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ನಂತರದಲ್ಲಿ ಚಿಂದಿ ಹಾಯ್ದು ಕೊಂಡು ಜೀವನ ಸಾಗಿಸುತ್ತಿದ್ದ ಎಂದು ಗೊತ್ತಾಗಿದೆ. ಎಂದಿನಂತೆ ಶುಕ್ರವಾರ ರಾತ್ರಿ ಊಟ ಮುಗಿಸಿ ಗ್ರಾಮದ ಸರ್ಕಾರಿ ಬಾಲಕಿಯರ ಶಾಲಾ ಆವರಣದಲ್ಲಿ ಮಲಗಿದ್ದ ಈತನ ತಲೆ ಮೇಲೆ ಯಾರು ದುಷ್ಕರ್ಮಿಗಳು ದಿಂಡು ಕಲ್ಲನ್ನು ಎತ್ತಿ ಹಾಕಿ ತಲೆಯನ್ನು ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.