ಹಿರಿಯೂರು ನಗರದಲ್ಲಿ ಸರಗಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಶುಕ್ರವಾರ ಬೆಳಿಗ್ಗರ 10 ಗಂಟೆ ಸುಮಾರಿಗೆ ಬೈಕ್ ನಲ್ಲಿ ಬಂದ ಇಬ್ಬರು ಕಚೇರಿಗೆ ಹೋಗುತ್ತಿದ್ದ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಕದ್ದು ಎಸ್ಕೇಪ್ ಆಗಿದ್ದಾರೆ. ನಗರದ ಚಳ್ಳಕೆರೆ ರಸ್ತೆಯ ಕೆ.ಇ.ಬಿ ಕಚೇರಿ ಬಳಿ ಈ ಘಟನೆ ಸಂಬವಿಸಿದೆ. ಲಕ್ಷ್ಮಿದೇವಿ ಎಂಬ ಕೆ.ಇ.ಬಿ ಕಚೇರಿಯ ಅಡೆಂಡರ್ ಅವರಿಗೆ ಸೇರಿದ ಮಾಂಗಲ್ಯ ಸರ ಎನ್ನಲಾಗಿದೆ. ಈಶ್ವರಗೆರೆ ಗ್ರಾಮದಿಂದ ಬಸ್ಸಿನಲ್ಲಿ ಬಂದು ಇಳಿದು, ಆಫೀಸ್ ಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಬೈಕ್ ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಲಕ್ಷ್ಮಿದೇವಿ ಕೊರಳಲ್ಲಿದ್ದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹಿರಿಯೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ