ಭಾರತೀಯ ಸ್ಟೇಟ್ ಬ್ಯಾಂಕಿನ ಮಲ್ಪೆ ಶಾಖೆಯ ಮ್ಯಾನೇಜರ್ ಸೇರಿದಂತೆ ಇತರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿನ ಲಕ್ಷಾಂತರ ರೂ. ಹಣವನ್ನು ದುರುಪಯೋಗಪಡಿಸಿ ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೌಸಿಂಗ್ ಫೈನಾನ್ಸ್ ಕಂಪೆನಿಯೊಂದರಿಂದ ಬಂದ ಇಮೇಲ್ ಸಂದೇಶದಂತೆ ಬ್ಯಾಂಕಿನ ಮಲ್ಪೆ ಶಾಖೆಯಿಂದ ಸಮುದ ಸುವರ್ಣ ನಂತೂರು, ಶರ್ಮಿಳಾ ಎಸ್. ಮುಳೂರು ಸುಶಾಂತ್ ತಿಂಗಳಾಯ, ಕೋಡಿ, ಎಂ.ರಮಾನಾಥ್ ಬೊಂದೆಲ್ ಮಂಗಳೂರು, ಸದಾನಂದ ಜಿ. ರಾವ್ ಕುಂಜಾಲು ಎಂಬ ಖಾತೆದಾರರಿಗೆ ಒಟ್ಟು 73,00,000 ರೂ. ಹಣ ವರ್ಗಾವಣೆ ಯಾಗಿರುವ ಬಗ್ಗೆ ತಿಳಿದು ಬಂದಿದೆ.