ಕಲಬುರಗಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಷ್ಟ್ 5 ರಂದು ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಹಿನ್ನಲೆಯಲ್ಲಿ, ಸಾರ್ವಜನಿಕರ ಹಿತೃದೃಷ್ಟಿಯಿಂದ ಸಾರಿಗೆ ನೌಕರರ ಸಂಘದಿಂದ ಪ್ರಯಾಣಿಕರಿಗೆ ಕಲಬುರಗಿ ನಗರದಲ್ಲಿ ಕರಪತ್ರ ಹಂಚಲಾಗ್ತಿದೆ.. ಆಗಷ್ಟ್ 4 ರಂದು ರಾತ್ರಿ 7.30 ಕ್ಕೆ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಎಸ್‌ಟಿಇ ಯೂನಿಯನ್ ಸಂಘಟನೆ ವತಿಯಿಂದ ಬಸ್ ನಿಲ್ದಾಣದಲ್ಲಿ ಕರಪತ್ರ ಹಂಚಿ ಮುಷ್ಕರದ ಬಗ್ಗೆ ಮಾಹಿತಿ ನೀಡಿದ್ದಾರೆ.