ಕಲಬುರಗಿ : ಕಲಬುರಗಿ ನಗರದಲ್ಲಿ ದಿನೇ ದಿನೇ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಗರದ ಬಿದ್ದಾಪುರ ಕಾಲೋನಿಯಲ್ಲಿ ಮನೆಯೊಂದಕ್ಕೆ ಖಧೀಮರು ಕನ್ನ ಹಾಕಿ ಗುಡಿಸಿ ಗುಂಡಾಂತರ ಮಾಡಿರೋ ಘಟನೆ ನಡೆದಿದೆ.. ಸೆಪ್ಟೆಂಬರ್ 13 ರಂದು ಸಂಜೆ 6 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಮಗಳಿಗೆ ಹುಷಾರಿಲ್ಲದ ಕಾರಣ ಅಶೋಕ ನಾಡಗೆ ಪತ್ನಿ ಜೊತೆ ಬೆಂಗಳೂರಿಗೆ ತೆರಳಿದ್ದರು.. ಈ ವೇಳೆ ಕಳ್ಳರು ಕೈಚಳಕ ತೋರಿದ್ದಾರೆ. ಪಾತ್ರೆ ಸಾಮಾನು, ಚಿನ್ನಾಭರಣ ಸಹಿತ 1.23 ಲಕ್ಷ ಮೌಲ್ಯದ ವಸ್ತುಗಳನ್ನ ದೋಚಿಕೊಂಡು ಹೋಗಿದ್ದಾರೆ. ಈ ಬಗ್ಗೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ