ತುಮಕೂರು ನಗರದ ಶ್ರೀದೇವಿ ಮೆಡಿಕಲ್ ಕಾಲೇಜು ಆಸ್ಪತ್ರೆ ಸಭಾಂಗಣದಲ್ಲಿ ಕೋಲಾರದ ಗಟ್ಟಹಳ್ಳಿ ಶ್ರೀ ಆಂಜನಪ್ಪಸ್ವಾಮಿ ಟ್ರಸ್ಟ್ ಧರ್ಮಾಧಿಕಾರಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ. ಬಿ. ಆರ್. ಜಯಮ್ಮ ಅವರಿಗೆ ಶ್ರೀ ದೇವಿ ರಮಣ ಮಹರ್ಷಿ ಪುರಸ್ಕಾರ ಪ್ರದಾನವನ್ನ ಮಾಡಲಾಯಿತು. ಈ ಕಾರ್ಯಕ್ರಮವು ಶ್ರೀ ದುರ್ಗಾಂಬಿಕಾ ಸೇವಾ ಟ್ರಸ್ಟ್ ಹಾಗೂ ಶ್ರೀ ದೇವಿ ಶಿಕ್ಷಣ ಸಂಸ್ಥೆ ಟ್ರಸ್ಟ್ ಸಹಕಾರದಲ್ಲಿ ಈ ಸಮಾರಂಭ ಶನಿವಾರ ಮಧ್ಯಾಹ್ನ 1ರಲ್ಲಿ ನಡೆಯಿತು.ಸಮಾರಂಭ ಉದ್ದೇಶಿಸಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ . ರೇವಣ್ಣ ಮಾತನಾಡಿ ಕಳೆದ ಬಾರಿ ಉತ್ತರ ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂಬ ವರದಿಯನ್ನ ನೀಡಿದ ಪೊಲೀಸ್ ಅಧಿಕಾರಿ ಮಾಳಗಿ ಅವರನ್ನ ನಾವು ಎಂದು ಮರೆಯುವುದಿಲ್ಲ ಎಂದರು.