ಕಬ್ಬು ತುಂಬಿದ ಲಾರಿ ಎಂದು ಸಾರಿಗೆ ಸಂಸ್ಥೆ ಬಸ್ ನ್ನು ಕಾಡಾನೆಯೊಂದು ತಡೆದ ಘಟನೆ ಚಾಮರಾಜನಗರ ಗಡಿಭಾಗವಾದ ತಾಳವಾಡಿಯಲ್ಲಿ ನಡೆದಿದೆ. ಆಹಾರ ಅರಸಿ ರಸ್ತೆಗಿಳಿದಿದ್ದ ಕಾಡಾನೆ ಬಸ್ ಕಂಡಿದ್ದೇ ತಡ ಕಬ್ಬು ತುಂಬಿದ ಲಾರಿ ಎಂದು ಭಾವಿಸಿ ಓಡೋಡಿ ಬಂದು ಚೆಕ್ ಮಾಡಿದೆ. ಕಬ್ಬಿಲ್ಲ ಎಂದು ಗೊತ್ತಾದ ಕೂಡಲೇ ಬಸ್ ಬಿಟ್ಟು ರಸ್ತೆ ಪಕ್ಕಕ್ಕೆ ಸರಿದಿದೆ. ಇನ್ನು, ಕಾಡಾನೆ ಓಡೋಡಿ ಬಂದಿದ್ದನ್ನು ಕಂಡ ಪ್ರಯಾಣಿಕರು ಕಿರುಚಿಕೊಂಡು ಕಿಟಕಿ ಮುಚ್ಚಿ ಆತಂಕಗೊಂಡಿದ್ದು ವೀಡಿಯೋದಲ್ಲಿ ಸೆರೆಯಾಗಿದೆ.