ಬಿಜೆಪಿ ಪಕ್ಷದ ವತಿಯಿಂದ ಧರ್ಮ ರಕ್ಷಣೆಗಾಗಿ ಜಾಗೃತಿ ಸಮಾವೇಶವು ಸೆ.1 ರಂದು ಧರ್ಮಸ್ಥಳದಲ್ಲಿ ನಡೆಯಲ್ಲಿದ್ದು, ಈ ಬೃಹತ್ ಸಮಾರಂಭದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ ಎಂದು ಶಾಸಕ ಸುರೇಶ್ ಗೌಡ ಹೇಳಿದರು. ತುಮಕೂರಿನ ಅಶೋಕ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಭಾನುವಾರ ಮಧ್ಯಾಹ್ನ 2.45 ರ ಸಮಯದಲ್ಲಿ ಅವರು ಮಾತನಾಡಿದರು.ಚಿನ್ನಯ್ಯ ಎಂಬಾತ ಒಂದು ಬುರುಡೆ ತಂದು ನೂರಾರು ಶವಗಳನ್ನು ಧರ್ಮಸ್ಥಳದಲ್ಲಿ ಹೂತಿರುವುದಾಗಿ ಹೇಳಿದ್ದಕ್ಕೆ ಅಲ್ಲಿನ ಪ್ರದೇಶವನ್ನ ಅಗೆಯಲಾಗಿದೆ. ಮಸೀದಿ, ಚರ್ಚ್ ಗಳಲ್ಲಿಯೂ ಶವಗಳಿವೆ ಎಂದು ಹೇಳಿದರೆ ಕಾಂಗ್ರೆಸ್ ಸರಕಾರ ಅಲ್ಲಿ ಅಗೆಯಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದರು.