ಸರಿಯಾದ ಸಮಯಕ್ಕೆ ಮಳೆ ಬೀಳುತ್ತಿರುವ ಕಾರಣ ಈ ಬಾರಿಯ ಹತ್ತಿ ಬೆಳೆ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಹದಿನೈದು ದಿನಗಳ ಹಿಂದೆ ಸುರಿದ ಮಳೆ ಹಾಗೂ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹತ್ತಿ ಬೆಳೆ ಸಮೃದ್ಧವಾಗಿ ಬೆಳೆಯುತ್ತಿದ್ದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 1.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಹಾಕಲಾಗಿದ್ದು, ಈ ಬಾರಿ ದರ ಕುಸಿಯಬಹುದು ಎಂಬ ಅನುಮಾನ ರೈತರನ್ನು ಕಾಡುತ್ತಿದೆ. ತೊಗರಿ ಕ್ಷೇತ್ರ ಕುಸಿದಿದ್ದು, ಹತ್ತಿ ಬೆಳೆ ಕ್ಷೇತ್ರ ಎಲ್ಲೆಡೆ ವಿಸ್ಯರಿಸಿದೆ. ಬೆಳೆ ನಳನಳಿಸುತ್ತಿರುವುದು ರೈತರಿಗೆ ಖುಷಿ ಕೊಟ್ಟರೆ, ದರ ಕುಸಿತದ ಭೀತಿ ರೈತರನ್ನ ಮಂಕಾಗಿಸಿದೆ ಎಂದು ಕಲ್ಯಾಣ ಕರ್ನಾಟಕ ರೈತ ಸಂಘದ ಅಧ್ಯಕ್ಷ ಜಿಂದಪ್ಪ ವಡ್ಲೂರು ಸೆ