ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಂಜುಮನ್ ಚುನಾವಣೆಯನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಚುನಾವಣೆಗೆ ಸ್ಪರ್ಧಿಸಲು ಮುಖಂಡರುಗಳು ತಮ್ಮದೇ ಆದ ತಯಾರಿ ನಡೆಸಿದ್ದರು. ಆದರೆ, ಚುನಾವಣೆಗೆ ನೇಮಕವಾದ ಅಧಿಕಾರಿಗಳು ಠೇವಣಿ ಮೊತ್ತವನ್ನು ಹೆಚ್ಚಿಸಿದ್ದಾರೆ. ಅಧಿಕೃತ ಆದೇಶದ ಪ್ರಕಾರ 1000 ಒಳಗಡೆ ಠೇವಣಿ ಪಡೆಯಬೇಕು. ಆದರೆ, ಅದಕ್ಕಿಂತ ಹೆಚ್ಚು ಠೇವಣಿ ಹೇರಲಾಗಿದ್ದು, ಕೂಡಲೇ ಇದನ್ನು ಕಡಿಮೆ ಮಾಡಬೇಕು ಅಂತ ಇಸ್ಲಾಂ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.