ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಶಾಂತಿಯುತವಾಗಿ ಅಚರಿಸಲು ಮನವಿ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಶಾಂತಿಯುತವಾಗಿ ಅಚರಿಸಿ ಯಾವುದೇ ಕೋಮು ಗಲಭೆಗೆ ಅವಕಾಶ ನೀಡಬೇಡಿ, ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿ ಎಂದು ಗಲ್ ಪೇಟೆ ಪೋಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ವಿಠ್ಹಳ್ ತಳವಾರ್ ಹೇಳಿದರು. ನಗರದ ಗಲ್‌ಪೇಟೆ ಪೋಲೀಸ್ ಠಾಣೆ ಅವರಣದಲ್ಲಿ ಶುಕ್ರವಾರ ಮಧ್ಯಾಹ್ನ 3:30 ಸಮಯದಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸೌಹರ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಗೌರಿ ಗಣೇಶ ಹಬ್ಬ ಆಗಸ್ಟ್ ೨೭ ರಂದು ಬಂದಿದೆ, ಸೆಪ್ಟೆಂಬರ್ ೫ ರಂದು ಈದ್ ಮಿಲಾದ್ ಹಬ್ಬ ಇದ್ದು ಎಲ್ಲರ