ಶಾಸಕ ಶಿವಲಿಂಗೇಗೌಡ ಮೃತ ತೌಫೀಕ್ ಅಂತಿಮ ದರ್ಶನ ಪಡೆದುಕೊಂಡರು.ಬಳಿಕ ಕೇಸ್ ದಾಖಲಿಸದಿದ್ದಕ್ಕೆ ಅರಸೀಕೆರೆ ಠಾಣೆ ಪಿಐ ಜಿ.ಕೆ.ರಾಘವೇಂದ್ರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಾರಣಾಂತಿಕ ಹಲ್ಲೆ ಆಗಿದ್ದರೂ ಕೇಸ್ ದಾಖಲು ಮಾಡಿಲ್ಲ. ಹಲ್ಲೆ ಮಾಡಿದ ಆರೋಪಿಗಳನ್ನೂ ಕೂಡ ಪೊಲೀಸರು ಬಂಧಿಸಿಲ್ಲ.ತೌಫೀಕ್ ಮೇಲೆ ಹಲ್ಲೆ ಮಾಡಿದವರು ಪ್ರಭಾವಿಗಳಿದ್ದಾರೆ. ಕೊಲೆಯಾದ ತೌಫೀಕ್ ತುಂಬಾ ಒಳ್ಳೆಯ ಹುಡುಗ. ಆ ಕುಟುಂಬಕ್ಕೆ ನಾನೇ ಖುದ್ದು ನಿಂತು ನೆರವು ನೀಡುತ್ತೇನೆ. ಅರಸೀಕೆರೆ ಇನ್ಸ್ಪೆಕ್ಟರ್ ರಾಘವೇಂದ್ರ ವಿರುದ್ಧ ಹಲವು ದೂರುಗಳಿವೆ. ಆತ ಮತ್ತೆ ಅರಸೀಕೆರೆಗೆ ಕಾಲಿಡಬಾರದು ಎಂದು ಹೇಳಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದರು.