ಕೊಳ್ಳೇಗಾಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಉತ್ತಂಬಳ್ಳಿ ಮೇಲ್ಸೇತುವೆ ಕುಸಿದ ಕಾರಣ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಮೇಲ್ಸೇತುವೆ ಪ್ರವೇಶಿಸುವ ಕಡೆ ಅಗರ- ಮಾಂಬಳ್ಳಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದು ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಚಾಮರಾಜನಗರ, ಬೆಂಗಳೂರು, ಮಲೆ ಮಹದೇಶ್ವರ ಬೆಟ್ಟವನ್ನು ಈ ರಸ್ತೆ ಸಂಪರ್ಕಿಸಲಿದ್ದು ಕಾಮಗಾರಿ ಪೂರ್ಣಗೊಳ್ಳುವ ತನಕ ಸರ್ವೀಸ್ ರಸ್ತೆ ಬಳಸಬೇಕೆಂದು ಸೂಚಿಸಲಾಗಿದೆ.