ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಹಿಲಾಲ್ ಎಜುಕೇಷನಲ್ ಸಂಸ್ಥೆ ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿರುವುದು ಶ್ಲಾಘನೀಯ ಇದು ಶೈಕ್ಷಣಿಕ ಬೆಳವಣಿಗೆಯತ್ತ ಒಂದು ಹೊಸ ಅಧ್ಯಾಯ ಕಳೆದ ವರ್ಷ ಶಾಲೆಯ ಕಟ್ಟಡಕ್ಕೆ ಶಂಕುಸ್ಥಾಪನೆ ನಡೆದಿದ್ದು, ಇಂದು ಬಿ-ಬ್ಲಾಕ್ ಕಟ್ಟಡದ ಕಾರ್ಯ ಆರಂಭವಾಗುತ್ತಿದೆ. ಸಂಸ್ಥೆಯು ಶೈಕ್ಷಣಿಕ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಪ್ರಶಂಸಿದ ಅವರು ಸಂಸ್ಥೆಯು ವಿಶಾಲವಾದ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಮುಂದಾದರೆ ಆರ್ಥಿಕ ಸದೃಢತೆ ಸಾಧ್ಯ ಬರುವ ಆದಾಯವನ್ನು ಶಿಕ್ಷಣ ಮತ್ತು ಸೌಲಭ್ಯಗಳ ಅಭಿವೃದ್ಧಿಗೆ ಬಳಸಿದರೆ ದೀರ್ಘಕಾಲೀನ ಬೆಳವಣಿಗೆ ಸಾಧ್ಯ ನಿಷ್ಠೆ ಮತ್ತು ಪ್ರಾಮಾಣಿಕತೆ ಇದ್ದಲ್ಲಿ ದಾರಿಗಳು ತಾನಾಗಿಯೇ