ಮುಂದಿನ ದಿನಗಳಲ್ಲಿ ಗೌರಿಬಿದನೂರು ನಗರಕ್ಕೆ ಮತ್ತು ಅಲಕಾಪುರ, ಜಿ.ಬೊಮ್ಮಸಂದ್ರ ಪಂಚಾಯಿತಿಗಳ ವ್ಯಾಪ್ತಿಯ ರೈತರ ಪಾಲಿಗೆ ಸಂಜೀವಿನಿಯಾಗಿ ಮಾರ್ಪಡಲಿರುವ ದ್ಯಾವಪ್ಪನ ಕೆರೆಯನ್ನು ಇಂದು ದ್ಯಾವಪ್ಪ ಕೆರೆಯ ಹೋರಾಟಗಾರರು ಮತ್ತು ಸಣ್ಣ ನೀರಾವರಿ ಇಲಾಖೆ,ಎತ್ತಿನಹೊಳೆ ಯೋಜನೆಯ ಅಧಿಕಾರಿಗಳು ಭೇಟಿ ನೀಡಿ,ಸ್ಥಳ ಪರಿಶೀಲನೆ ನಡೆಸಿದರು. ಹನುಮೇನಹಳ್ಳಿ ಸರ್ವೆ ನಂಬರ್ 269 ರಲ್ಲಿ ಸುಮಾರು 202 ಎಕರೆಗಳಷ್ಟು ಸರ್ಕಾರಿ ಜಮೀನಿನಲ್ಲಿ ಕೆರೆ ನಿರ್ಮಾಣ ಮಾಡಿದರೆ ಎಲ್ಲರಿಗೂ ಅನುಕೂಲವಾಗಲಿದೆ. ಹಾಗೆ ಎತ್ತಿನಹೊಳೆ ನೀರು ಬಂದರೆ ಆ ಕೆರೆಗಳಿಗೆ ಹರಿಸಬಹುದು ಎಂದು ಮುಖಂಡರು ತಿಳಿಸಿದ್ದಾರೆ.