ಚಿತ್ರದುರ್ಗ:ಕಾರಲ್ಲಿದ್ದ 97ಲಕ್ಷ ರೂ. ಸಮೇತ ಬಾಡಿಗೆ ಕಾರು ಚಾಲಕ ಎಸ್ಕೇಪ್ ಆಗಿದ್ದ, ಸಿನಿಮೀಯ ರೀತಿಯಲ್ಲಿ ಆರೋಪಿ ಚಾಲಕನನ್ನು ಬಂಧಿಸಿಸುವಲ್ಲಿ ಪೊಲೀಸರು ಯಶಸ್ವೀಯಾಗಿದ್ದಾರೆ. ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ, ಸಿಪಿಐ ಕುಮಾರ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವೀಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣವಾಗಿದ್ದು ಬೆಂಗಳೂರು ಮೂಲದ ನಿವೃತ್ತ ಎಸ್ಪಿ ಗುರುಪ್ರಸಾದ್ ಗೆ ವಂಚನೆ ಮಾಡಲಾಗಿತ್ತು. ಆಗಸ್ಟ್ 25ರಂದು ಗುರುಪ್ರಸಾದ್ ಪತ್ನಿ ಲಲಿತಾ ಜತೆ ಬಳ್ಳಾರಿಗೆ ತೆರಳಿದ್ದರು ಬಳ್ಳಾರಿಯಲ್ಲಿದ್ದ ಜಮೀನು ಮಾರಾಟ ಮಾಡಿದ್ದರು.