ಅರಕಲಗೂಡು : ಮಗಳನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದಕ್ಕೆ ರೊಚ್ಚಿಗೆದ್ದ ಅಳಿಯ ಚಾಕುವಿನಿಂದ ಇರಿದು ಅತ್ತೆಯನ್ನೇ ಕೊಲೆ ಮಾಡಿರುವ ಘಟನೆ ಅರಕಲಗೂಡು ತಾಲ್ಲೂಕಿನ ರಾಮನಾಥಪುರದಲ್ಲಿ ನಡೆದಿದೆ.ಫೈರೋಜಾ ಭಾನು (55) ಕೋಲೆಯಾದ ಮಹಿಳೆ.ಪಾಪಿ ಪತಿ ರಸೂಲ್ ನಿತ್ಯವೂ ಹೆಂಡತಿಗೆ ಕಿರುಕುಳ ನೀಡುತ್ತಿದ್ದ. ಅಳಿಯ ಕೊಡುತ್ತಿದ್ದ ಕಿರುಕುಳ ತಾಳಲಾರದೆ ಮಗಳನ್ನು ತಾಯಿ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ಇದರಿಂದ ರೊಚ್ಚಿಗೆದ್ದ ರಸೂಲ್ ಅತ್ತೆ ಮನೆಗೆ ಬಂದು ಚಾಕುವಿನಿಂದ ಪತ್ನಿ ಸಮೀರಾ ಹಾಗು ಅತ್ತೆ ಮೇಲೆ ದಾಳಿ ಮಾಡಿದ್ದಾನೆ.ಈ ವೇಳೆ ಮಗಳನ್ನು ರಕ್ಷಿಸಿಕೊಳ್ಳಲು ಬಂದ ತಾಯಿ ಫೈರೋಜಾ ಭಾನುವಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಕೊಣನೂರು ಪೊಲೀಸರು ಭೇಟಿ ನ