ವಿಜಯಪುರ ನಗರದಲ್ಲಿ ನಡೆದ ಈದ್ ಮಿಲಾದ್ ಹಬ್ಬದಲ್ಲಿ ಪೊಲೀಸಕೋ ಹಠಾಲೋ ಎಂಬ ಸಾಂಗ್ ಹಾಕಿದಕ್ಕೆ ಮೂವರು ವಿರುದ್ಧ ಕೇಸ್ ದಾಖಲಾಗಿದೆ. ಡಿಜೆ ವೆಹಿಕಲ್ ಓನರ್ A1, ಡಿಜೆ ಆಫರೇಟರ್ A2, ಎಂಟಿ ತೌಸಿಫ್15s ಇನ್ಸ್ಟಾಗ್ರಾಮ್ ಐಡಿ ವಿರುದ್ಧ ಪೊಲೀಸ ಅಧಿಕಾರಿ ಜಿ ಕೆ ದೇವಕರ್ ಪ್ರಕರಣ ದಾಖಲು ಮಾಡಿದ್ದಾರೆ. ಸೆಪ್ಟೆಂಬರ್ 5ರಂದು ಈದ್ ಮಿಲಾದ ಹಬ್ಬದಲ್ಲಿ ಸಂಜೆ ಆರು ಗಂಟೆಗೆ 15 ಮಿನಿಟ್ ಕೆ ಲಿಯೆ ಪೊಲೀಸಕೋ ಹಠಾಲೋ ಬತಾತೆ ಯೇ ಕಿಸ್ಮೆ ದಮ್ ಹೈ ಹಿಂದೂಸ್ತಾನ ಬನಾ ದೇಕಿಯೇ ಅಂತಾ ಡಿಜೆ ಹಾಕಿದ್ದಾರೆ. ಈ ಕುರಿತು ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಸೋಮವಾರ ಸಾಯಂಕಾಲ 5ಗಂಟೆ ಸುಮಾರಿಗೆ ಪ್ರಕರಣ ದಾಖಲಾಗಿದೆ.