ಮಕ್ಕಳ ಶೈಕ್ಷಣಿಕ ಬೆಳವಣಿಗೆ ಪೋಷಕರೊಂದಿಗೆ ಶಿಕ್ಷಕರ ಭಾಂಧವ್ಯ ಮುಖ್ಯವಾಗಿದೆ, ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚಿಸಲು ಪೋಷಕರು ಕಾಲೇಜಿನ ಉಪನ್ಯಾಸಕರೊಂದಿಗೆ ಸಂಪರ್ಕದಲ್ಲಿರಬೇಕು. ತಮ್ಮ ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಶಿಕ್ಷಕರಿಗೆ ಪೋಷಕರು ಸಹಕಾರ ನೀಡುವಂತೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪರಶುರಾಮ್ ಎನ್ ಉಂಕಿ ರವರು ಮನವಿ ಮಾಡಿದರು. ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋನವಾರ ನಡೆದ ಮೊದಲ ಪೋಷಕರ ಸಭೆಗೆ ಚಾಲನೆ ನೀಡಿ ಮಾತನಾಡಿ, ನಮ್ಮ ಸರ್ಕಾರಿ ಕಾಲೇಜಿನಲ್ಲಿ ಉತ್ತಮ ಅನುಭವಿ, ಗುಣಮಟ್ಟದ ಉಪನ್ಯಾಸಕರಿದ್ದು, ಬೋಧನೆಗಿಂತ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಹೆಚ್ಚಿನ ಗಮನ ನೀಡಲಾಗುತ್ತದೆ. ಮಾಸಿಕ ಪರೀಕ್ಷೆಗಳು, ಮಧ್ಯಂತರ ಪರೀಕ್ಷೆಗಳ ನಂತರ ಪೋಷಕರ ಸಭೆಯನ್ನು ನಡೆಸಲಾಗುವುದು ಎಂದ್ರು