ಬಿಹಾರಕ್ಕೆ ಭೇಟಿ ನೀಡೋ ವಿಚಾರಕ್ಕೆ ಸಂಬಂಧಿಸಿ ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆಶಿ ಅವರು, ಕಾಂಗ್ರೆಸ್ ಪಾರ್ಟಿ ನಾಯಕರು ರಾಹುಲ್ ಗಾಂಧಿ ಅವರ ಯಾತ್ರೆ ನೋಡಬೇಕು ಎಂದಿದ್ರು. ಪ್ಲೈಟ್ ನಲ್ಲಿ ಎಷ್ಟು ಆಗುತ್ತೆ ನೋಡಬೇಕು. ಇನ್ನೊಂದು ಟ್ರಿಪ್ ಇದೆ ಲಾಸ್ಟ್ ಡೇ. ಸಿಎಂ ಕೂಡ ಹೋಗ್ತಿದ್ದಾರೆ, ಅವರ ಜೊತೆ ಯಾರು ಬರ್ತಾರೆ ನೋಡೋಣ ಎಂದರು. ಅನಾಮಿಕ ಬಂಧನ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ನೋಡಿ, ಬಿಜೆಪಿಯವರು ಏನು ಮಾತಾಡಿರಲಿಲ್ಲ. ಅವರು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತು ಆಡಿದರು. ನಾನು ಪ್ರಸ್ತಾಪವನೆ ಮಾಡಿದ್ಮೇಲೆ ಅವರು ಮಾತನಾಡುತ್ತಿದ್ದಾರೆ. ನನಗೆ ಮೊದಲಿನಿಂದ ನಂಬಿಕೆ ಇತ್ತು. ತನಿಖೆಗೆ ಧರ್ಮಾಧಿಕಾರಿ ಗಳು ಕೂಡ ಸ್ವಾಗತ ಮಾಡಿದರು.