ಪ್ರಿಯಕರೊಂದಿಗೆ ಸೇರಿ ಪತ್ನಿ ಪತಿಯನ್ನು ಕೊಲ್ಲುವ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರದಲ್ಲಿ ಸೋಮವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಪತಿ ಬೀರಪ್ಪ ಮಾಧ್ಯಮಕ್ಕೆ ಮಹತ್ವದ ಹೇಳಿಕೆ ನೀಡಿದರು. ನನ್ನ ಹೆಂಡತಿ ಸುನಂದಾ ಹಾಗೂ ಆತನ ಪ್ರಿಯಕರ ಇಬ್ಬರು ಸೇರಿ ನನ್ನನ್ನು ಹತ್ಯೆ ಮಾಡಲು ಯತ್ನಿಸಿದ್ದಾರೆ, ಈಗಾಗಲೇ ನನ್ನ ಹೆಂಡತಿಯನ್ನು ಪೋಲೀಸರು ಬಂಧಿಸಿದ್ದಾರೆ. ನನ್ನ ಹೆಂಡತಿ ಪ್ರಿಯಕರ ಸಿದ್ದಪ್ಪ ಕ್ಯಾತನಕೇರಿ ಪರರಿಯಾಗಿದ್ದಾನೆ ಆತನಿಂದ ನಮಗೆ ಜೀವ ಭಯವಿದೆ ಕೂಡಲೇ ಆತನನ್ನು ಬಂಧಿಸಬೇಕು ಮತ್ತು ನನಗೆ ರಕ್ಷಣೆ ನೀಡಬೇಕು ಎಂದು ಪತಿ ಬೀರಪ್ಪ ಮಾಧ್ಯಮ ಮೂಲಕ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದನು.