ಗಣೇಶ ಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಸೂಕ್ಷ್ಮ ಪ್ರದೇಶದ ಸೇರಿದಂತೆ ವಿವಿಧೆಡೆ ಮಂಗಳವಾರ ಸಂಜೆ 6 ಗಂಟೆಗೆ ಪೊಲೀಸ್ ಪಥ ಸಂಚಲನ ನಡೆಯಿತು. ದಾವಣಗೆರೆ ನಗರದ ಮಟ್ಟಿಕಲ್ ಪ್ರದೇಶದಿಂದ ಪ್ರಾರಂಭವಾದ ಪೊಲೀಸ್ ಪಥಸಂಚಲನ ದಾವಣಗೆರೆ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಸಾರ್ವಜನಿಕರು ಧೈರ್ಯ ತುಂಬಿತು. ಪಥಸಂಚಲನ ನೇತೃತ್ವವನ್ನು ಎಸ್ಪಿ ಉಮಾ ಪ್ರಶಾಂತ್ ವಹಿಸಿದ್ದರು.