ಧಾರವಾಡ ತಾಲೂಕಿನ ಸತ್ತೂರಿನ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ನವಲೂರು ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಇಂದು ಆಯೋಜಿಸಲಾಗಿತ್ತು. ಮಧ್ಯಾಹ್ನ 3 ಗಂಟೆಗೆ ಪಾಲಿಕೆ ಸದಸ್ಯರಾದ ನೀಲಮ್ಮಾ ಯಲ್ಲಪ್ಪ ಅರವಳಾದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಅಡವೇರಿ, ಮಂಜುನಾಥ್ ಇಂಗನಹಳ್ಳಿ, ಭೀಮಪ್ಪ ಬೋಸಪ್ಪನವರ, ಮೈಲಾರ್ ಉಪ್ಪಿನ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.