ಪ್ರತಿಷ್ಠಾಪನೆ ಮಾಡಿದ್ದ ಪಾಂಚಜನ್ಯ ಹಿಂದೂ ಗಣಪತಿ ವಿಸರ್ಜನಾ ಶೋಭಾಯಾತ್ರೆ ಮೆರವಣಿಗೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ ಗೌಡ ಮಳೆಯಲ್ಲೂ ಕುಣಿದು ಕುಪ್ಪಳಸಿದ್ದಾರೆ.ಮಧ್ಯಾಹ್ನ ಆರಂಭವಾದ ಮೆರವಣಿಗೆ ಬಸವೇಶ್ವರ ದೇವಸ್ಥಾನ, ಹೊಸಲೇನ್ ರಸ್ತೆ, ಬಿ.ಎಂ.ರಸ್ತೆ, ಸುಭಾಷ್ ಚೌಕ ಮೂಲಕ ಸಾಗಿ ನಂತರ ದೇವಿಗೆರೆಗೆ ತಲುಪಲಿದೆ. ರಾತ್ರಿ 9 ಗಂಟೆ ಸುಮಾರಿಗೆ ಗಣೇಶ ಮೂರ್ತಿಯ ವಿಸರ್ಜನೆ ಆಗಲಿದೆ. ಈ ವೇಳೆ ಒಂದಲ್ಲ, ಎರಡಲ್ಲ ಮೂರು ಡಿಜೆ ಸೌಂಡ್ ಹಾಗೂ ಹಾಡುಗಳಿಗೆ ಯುವಕ-ಯುವತಿಯರು ಪ್ರತ್ಯೇಕವಾಗಿ ಕುಣಿದು ಕುಪ್ಪಳಿಸಿದರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂಜೆ ಗೌಡ ಕುಣಿದು ಕಳಿಸಿ ಎಲ್ಲರ ಗಮನ ಸೆಳೆದರು.