ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಎಂಬ ಆಸೆ ವ್ಯಕ್ತಪಡಿಸಿದ ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ವಿಡಿಯೋ ವೈರಲ್ ಆಗಿದೆ. ಸೋಮವಾರ ಭದ್ರಾವತಿ ನಗರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಮುಂದಿನ ಜನ್ಮದಲ್ಲಿ ನಾನು ಮುಸ್ಲಿಂ ಆಗಿ ಹುಟ್ಟಬೇಕು ಎಂದು ಶಾಸಕ ಸಂಗಮೇಶ್ ಹೇಳಿದ್ದಾರೆ ಈ ಮಾತು ತೀವ್ರ ಚರ್ಚೆಗೆ ಬಾಸವಾಗಿದೆ. ಈ ಕುರಿತಾದ ವಿಡಿಯೋ ಮಂಗಳವಾರ ವೈರಲ್ ಆಗಿದ್ದು, ಇದೇ ವೇಳೆ ತಮ್ಮ ಪುತ್ರ ಗಣೇಶನ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಮುಂಬರುವ ಚುನಾವಣೆಯಲ್ಲಿ ಪುತ್ರ ಗಣೇಶನನ್ನು ಕಣಕ್ಕಿಳಿಸುವ ಸುಳಿವನ್ನ ಬಿ.ಕೆ.ಸಂಗಮೇಶ್ ನೀಡಿದ್ದಾರೆ.