ಚಾಮರಾಜನಗರದ ರಾಮಸಮುದ್ರಲ್ಲಿ ಕಿಂಗ್ ಬಾಯ್ಸ್ ತಂಡದ ವತಿಯಿಂದ ಗಣಪತಿ ವಿಸರ್ಜನಾ ಮಹೋತ್ಸವವು ಭಾರಿ ವಿಜೃಂಭಣೆಯಿಂದ ಜರುಗಿತು.ಗೌರಿ-ಗಣೇಶ ಹಬ್ಬದಂದು ಪ್ರತಿಷ್ಠಾಪನೆಗೊಂಡ ಗಣಪತಿ ಮೂರ್ತಿಗೆ ವಿವಿಧ ಹೂಗಳಿಂದ ಭವ್ಯ ಅಲಂಕಾರ ಮಾಡಿ ದೀಪಾಲಂಕಾರದಿಂದ ಸಿಂಗಾರಿಸಲಾಗಿದ್ದು,ಮೆರವಣಿಗೆ ನಡೆಸಲಾಯಿತು ಈ ವೇಳೆ ನೂರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು.ಮೆರವಣಿಗೆಯು ವಾದ್ಯಮೇಳ, ವೀರಗಾಸೆ, ಕಂಸಾಳೆ, ನಂಧೀಧ್ವಜ, ಡೊಳ್ಳು, ನಗಾರಿ ಇತ್ಯಾದಿ ಕಲಾ ತಂಡಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಭಕ್ತರು ತಮ್ಮ ಮನೆಗಳ ಮುಂದೆ ಗಣಪನಿಗೆ ಭಕ್ತಿಭಾವದಿಂದ ಆರತಿ ಮಾಡುವ ಮೂಲಕ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬೀರಗಾಸೆ ತಂಡದ ಮಂಡಲೋತ್ಸವ ವಿಶೇಷ ಆಕರ್ಷಣೆಯಾಯಿತು.