ಸೋಮವಾರ ಮಧ್ಯಾಹ್ನ 3 ಗಂಟೆಗೆ ಮದ್ದೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದಲ್ಲಿ ಸಚಿವ ಡಿ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಮಾತ್ನಾಡಿದ ಅವರು ಪ್ರಕರಣದ ಕುರಿತು ಪೊಲೀಸರು & ಹಿರಿಯ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ, ತನಿಖೆ ಬಳಿಕ ಮುಂದಿನ ಮಾಹಿತಿ ನೀಡುತ್ತೇವೆ ಎಂದರು. ಬಳಿಕ ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಯಾತ್ರೆ ವೇಳೆ DJ ಪರ್ಮಿಷನ್ ವಿಚಾರಕ್ಕೆ ಮಾತ್ನಾಡಿದ ಅವರು ಯಾವುದಕ್ಕೂ ಜಿಲ್ಲಾಡಳಿತ ಅನುಮತಿ ಕೊಟ್ಟಿಲ್ಲ, ಕೊಡಲ್ಲ, ಎಲ್ಲಾ ಕಡೆ ಗಣೇಶನ ವಿಸರ್ಜನೆ ಆಗಿದೆ ಎಂದರು. ಕಳೆದ ಬಾರಿ ಹಲವು ಮಂದಿಗೆ ಕಿವಿ ಸಮಸ್ಯೆ ಆಗಿದೆ. 4 ಲಕ್ಷ ಜನ ಸೇರುವ ಕಾರಣಕ್ಕೆ ನಗರದ ಪರಿಸರ ಹಾಳಾಗುತ್ತದೆ, ಭಕ್ತಿಯಿಂದ ಮಾತ್ರ ಗಣೇಶ ವಿಸರ್ಜನೆ ಮಾಡಲಿ ಎಂದರು.