Download Now Banner

This browser does not support the video element.

ಕೊಳ್ಳೇಗಾಲ: ಕೊಳ್ಳೇಗಾಲದ ಜಿ.ಪಿ. ಮಲ್ಲಪ್ಪಪುರಂ 5ನೇ ಕ್ರಾಸ್‌ನಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ

Kollegal, Chamarajnagar | Sep 6, 2025
ಕೊಳ್ಳೇಗಾಲ: ಪಟ್ಟಣದ ಜಿ.ಪಿ. ಮಲ್ಲಪ್ಪಪುರಂ ಬಡಾವಣೆಯ 5ನೇ ಕ್ರಾಸ್ ರಸ್ತೆಯಲ್ಲಿನ ಸ್ಥಳದ ಒತ್ತುವರಿಯನ್ನು ನಗರಸಭೆ ಪೌರಯುಕ್ತ ರಮೇಶ್ ರವರ ನೇತೃತ್ವದಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ ಶನಿವಾರ ತೆರವುಗೊಳಿಸಲಾಯಿತು.ಕಾರ್ಯಾಚರಣೆಯಲ್ಲಿ ಎಇಇ ನಟರಾಜು, ಎಂಜಿನಿಯರ್ ಪ್ರಸನ್ನ, ಆರೋಗ್ಯ ಅಧಿಕಾರಿ ಚೇತನ್ ಕುಮಾರ್, ಕಂದಾಯ ನಿರೀಕ್ಷಕ ರವಿಶಂಕರ್, ಹಾಗೂ ನಂಜುಂಡಶೆಟ್ಟಿ ಅವರುಗಳು ಉಪಸ್ಥಿತರಿದ್ದರು. ಈ ವೇಳೆ ಪೌರಯುಕ್ತ ರಮೇಶ್ ಅವರು ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಗಳನ್ನು ತೆರಳಿಸುವುದು ಹಾಗೂ ನಗರ ಸ್ವಚ್ಛತೆಗೆ ಇದು ಅವಶ್ಯಕ. ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ನಿರ್ಮಾಣಗಳು ನಗರ ದಾರಿಗಳ ಸರಿಯಾದ ಬಳಕೆಗಾಗಿ ತೊಂದರೆ ಉಂಟುಮಾಡುತ್ತಿವೆ. ಮುಂದಿನ ದಿನಗಳಲ್ಲಿಅಕ್ರಮದ ವಿರುದ್ಧ ಕ್ರಮ ನಿರಂತರವಾಗಿರಲಿದೆ ಎಂದರು
Read More News
T & CPrivacy PolicyContact Us