ತಾಲೂಕಿನ ಹುಣಸಿಹಾಳಹುಡಾ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಕೊನೆಯ ಶುಕ್ರವಾರ ಮತ್ತು ಶನಿವಾರದಂದು ಹುಡೇದ್ ಆಂಜನೇಯ ಸ್ವಾಮಿಯ ಪಲ್ಲಕ್ಕಿ ಸೇವೆ ಮತ್ತು ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಹುಣಸಿಹಾಳಹುಡಾ ಗ್ರಾಮದಿಂದ ಕಾಡ್ಲೂರು ಗ್ರಾಮದವರೆಗೆ ಗ್ರಾಮದ ಮಹಿಳೆಯರು ಮತ್ತು ಯುವಕರು ಸುಮಾರು 40 ಕಿಲೋ ಮೀಟರ್ ದೂರದ ಕಾಡ್ಲೂರು ಬಳಿಯ ಕೃಷ್ಣಾನದಿ ತೀರದಲ್ಲಿರುವ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರು ಆಂಜನೇಯ ದೇವಸ್ಥಾನಕ್ಕೆ ಪಲ್ಲಕ್ಕಿ ಸಮೇತ ಹನುಮನ ಧ್ಯಾನಿಸುತ್ತ 200 ಕ್ಕೂ ಅಧಿಕ ಭಕ್ತರು ಓಡುತ್ತಾರೆ. ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿ ಮರುದಿವಸ ಬೆಳಗ್ಗೆ ಪ್ರಾಣದೇವರು ಹಾಗೂ ಗಂಗಾಮಾತೆಗೆ ವಿಶಿಷ್ಟವಾಗಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಪುನಃ ಅಲ್ಲಿಂ