ಮೊಳಕಾಲ್ಮುರು:-ಪಟ್ಟಣದ ಕೆಎಚ್ ಡಿಸಿ ಕಾಲೋನಿಯ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನದ ಆವರಣದಲ್ಲಿ ವಿಶ್ವಶಾಂತಿ ಹಾಗೂ ಲೋಕಕಲ್ಯಾಣಾರ್ಥ ಲಲಿತಾ ಹೋಮ ಹಮ್ಮಿಕೊಳ್ಳಲಾಗಿತ್ತು. ಶರನ್ನವರಾತ್ರಿ ಅಂಗವಾಗಿ ಶ್ರೀ ಬನ್ನಿಮಹಾಂಕಾಳಿ ದೇವಿ ದೇವಸ್ಥಾನದಲ್ಲಿ ದೇವಿ ಮೂರ್ತಿಗೆ ಕ್ಷಿರಾಭಿಷೇಕ, ತೈಲಾಭಿಷೇಕ, ಪಂಚಾಮೃತ ಅಭಿಷೇಕಗಳನ್ನು ನೆರವೇರಿಸಲಾಯಿತು. ನಂತರ ದೇವಿ ಮೂರ್ತಿಗೆ ಪುಷ್ಪಾಲಂಕಾರ ಪೂಜೆ ಸಲ್ಲಿಸಲಾಯಿತು. ರಾಯದುರ್ಗದ ರಾಮಮೂರ್ತಿ ಸ್ವಾಮಿಗಳ ನೇತೃತ್ವದಲ್ಲಿ ಲಲಿತಾ ಹೋಮ ನಡೆಯಿತು.ಸೆಪ್ಟೆಂಬರ್ 22ರಿಂದ ಕಾರ್ಯಕ್ರಮಗಳು ಆರಂಭವಾಗಿದ್ದು ಶನಿವಾರದಂದು ದೇವಿಗೆ ವಿಶೇಷವಾಗಿ ಮುತ್ತು ರತ್ನಗಳ ಅಲಂಕಾರ ಮಾಡಲಾಗಿತ್ತು.