ಕಲಬುರಗಿ : ಅತಿವೃಷ್ಟಿಯಿಂದ ಹಾಳಾದ ತೊಗರಿ ಬೆಳೆ ಗಿಡವನ್ನ ಹಿಡಿದು ಕಲಬುರಗಿ ನಗರದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಳಿ ಯುವಕನೋರ್ವ ಬಂದಿದ್ದ.. ಈ ವೇಳೆ ತೊಗರಿ ಗಿಡ ಹಿಡಿದುಕೊಂಡು ಬಂದ ಯುವಕನ್ನನ್ನ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ತರಾಟೆಗೆ ತೆಗೆದುಕೊಂಡು ಘಟನೆ ಸೆಪ್ಟೆಂಬರ್ 7 ರಂದು ಮಧ್ಯಾನ 12 ಗಂಟೆಗೆ ನಡೆದಿದೆ... ತೊಗರಿ ಬೆಳೆ ಹಾನಿಯಾಗಿದೆ ಅಂತಾ ಹೇಳಲು ಮುಂದಾದಾಗ, ನಿನ್ನದು ಎಷ್ಟು ಹಾಳಾಗಿದೆ ಅಂತಾ ಖರ್ಗೆ ಪ್ರಶ್ನಿಸಿದ್ದು, ಅದಕ್ಕೆ ನಾಲ್ಕು ಎಕರೆ ಸರ್ ಅಂತಾ ಯುವಕ ಉತ್ತರಿಸಿದ್ದಾನೆ. ಅದಕ್ಕೆ ನಿನ್ನದು ನಾಲ್ಕು ಎಕರೆ ಹಾಳಾಗಿರಬಹುದು..ನನ್ನದು ನಲವತ್ತು ಎಕರೆ ಹಾಳಾಗಿದೆ ಅಂತಾ ಖರ್ಗೆ ಆಕ್ರೋಶಗೊಂಡು ತರಾಟೆಗೆ ತೆಗೆದುಕೊಂಡಿದ್ದಾರೆ..