ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸದನದಲ್ಲಿ ಧ್ವನಿ ಎತ್ತುವ ಮೂಲಕ ಇತ್ಯರ್ಥಕ್ಕಾಗಿ ಪ್ರಾಮಾಣಿಕ ಪ್ರಯತ್ನಿಸುವುದಾಗಿ ಎಂ. ಎಲ್. ಸಿ ಶಶಿಲ್ ಜಿ. ನಮೋಷಿ ಅಭಯ ನೀಡಿದರು. ವಿಧಾನ ಪರಿಷತ್ ಸದಸ್ಯರಾಗಿ ಈಶಾನ್ಯ ಕರ್ನಾಟಕದ ಸಮಸ್ತ ಶಿಕ್ಷಕರ ಬೇಡಿಕೆ ಆಲಿಸಿ ಈಡೇರಿಸುವುದು ನನ್ನ ಕರ್ತವ್ಯ ಆ ನಿಟ್ಟಿನಲ್ಲಿ ಶಿಕ್ಷಕರ ಸಮಸ್ಯೆ ಆಲಿಕೆಗೆ ಬುಧವಾರ ಮಧ್ಯಾಹ್ನ 2:30ಕ್ಕೆ ಇಲ್ಲಿನ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದರು.