ಪತ್ನಿ ತವರು ಮನೆಗೆ ಹೋಗಿದ್ದಾಳೆ ಎಂದು ಮನನೊಂದ ಪ್ರತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲೂಕಿನ ಚಿಕ್ಕ ಉಪ್ಪೇರಿ ಗ್ರಾಮದ ಈರಣ್ಣ ಎನ್ನುವ 38 ವರ್ಷದ ವ್ಯಕ್ತಿ ಸಾವನಪ್ಪಿರುವ ದುರ್ದೈವಿಯಾಗಿದ್ದಾನೆ. ಮಂಗಳವಾರ ಸಾಯಂಕಾಲ ನಾರಾಯಣಪುರ ಬಲದಂಡೆ ಕಾಲುವೆಗೇ ಹಾರಿದ್ದು, ಎರಡು ದಿನಗಳ ನಿರಂತರ ಹುಡುಕಾಟ ನಡೆಸಿದ ನಂತರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳ ಹುಡುಕಾಟದ ಸಮಯದಲ್ಲಿ 14 ಗಂಟೆಗಳ ನಂತರ ಶವ ಪತ್ತೆಯಾಗಿದೆ. ಲಿಂಗಸುಗೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.