ಈದ್ ಮಿಲಾದ್ ಹಿನ್ನೆಲೆಯಲ್ಲಿ ಗುರುವಾರ ಸಂಜೆ 4:30ಕ್ಕೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ಶ್ರದ್ಧಾ ಭಕ್ತಿಯ ವಿವಿಧ ಪ್ರತಿಕೃತಿಗಳ ಭವ್ಯ ಮೆರವಣಿಗೆ ನಡೆಸಲಾಯಿತು. ವಾಂಜ್ರಿ ಬಡಾವಣೆ ಮಸೀದಿ, ಶಿವಪುರ ಬಡಾವಣೆ ಮಸೀದಿ ಕಮಿಟಿಗಳು ಸಿದ್ಧಪಡಿಸಿದ ಮುಸ್ಲಿಂ ವಿವಿಧ ಪ್ರತಿಕೃತಿಗಳ ಭವ್ಯ ಮೆರವಣಿಗೆ ನಗರದ ಶಿವಪುರ ಬಸವೇಶ್ವರ ವ್ರತ ಶಿವಚಂದ್ರ ರಸ್ತೆ ಮಾರ್ಗವಾಗಿ ಜೈನ್ ಓಣಿ ಮಾರ್ಗವಾಗಿ ಭವ್ಯ ಮೆರವಣಿಗೆ ನಡೆಸಲಾಯಿತು.