ಕಳೆದ ಮೂರ್ನಾಲ್ಕು ದಿನಗಳಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ಬಿಡದೆ ಮಳೆ ಸುರಿಯುತ್ತಿದೆ ಮಳೆಯ ಆರ್ಭಟಕ್ಕೆ ಹಲವು ಕಡೆ ಅನಾಹುತಗಳು ಸಂಭವಿಸಿದೆ. ಅದೇ ರೀತಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅತ್ಯಂತ ಸುರಿದ ಭಾರಿ ಮಳೆ ಕೊಪ್ಪದ ಹಯಾತ್ ಸಾಬ್ ರವರಿಗೆ ಸಂಬಂಧಿಸಿದ ಮನೆ ಗೋಡೆ ಕುಸಿತಗೊಂಡಿರುವ ಘಟನೆ ಗುರುವಾರ ನಡೆದಿದ್ದು,ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.