ಚಿತ್ರದುರ್ಗ ತಾಲ್ಲೂಕಿನ ವಿ.ಪಾಳ್ಯ ಗ್ರಾಮಕ್ಕೆ ತೆರಳುವ ದುರ್ಗಮ ರಸ್ತೆಗೆ ವಾಹನ ಸವಾರರು ರೋಸಿ ಹೋಗಿದ್ದಾರೆ. ಬೃಹತ್ ಗಾತ್ರದ ಗುಂಡಿಗಳಲ್ಲಿ ನಿತ್ಯವೂ ಈ ಭಾಗದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಅಲ್ಲದೇ ಈ ರಸ್ತೆಯಲ್ಲಿ ಓಡಾಟ ಮಾಡುವ ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚಾರ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಭೀಮಸಮುದ್ರ ಹಾಗೂ ವಿ. ಪಾಳ್ಯ ನಡುವಿನ ರಸ್ತೆ ಸಂಪೂರ್ಣ ಗುಂಡಿ ಮಯವಾಗಿದ್ದು, ವಿ.ಪಾಳ್ಯ, ಬಳ್ಳೆಕಟ್ಟೆ, ಮಳಲಿ, ಭೀಮಸಮುದ್ರ ಸೇರಿ ಹಲವು ಗ್ರಾಮಗಳಿಗೆ ತೆರಳುವ ರಸ್ತೆ ಪೂರ್ತಿ ಕಿತ್ತೋಗಿದೆ. ಮೈನಿಂಗ್ ಲಾರಿಗಳ ಸಂಚಾರಕ್ಕೆ ರೋಸಿ ಹೋಗಿರುವ ಸಾರ್ವಜನಿಕರು, ಬೃಹತ್ ಗಾತ್ರದ ಲಾರಿಗಳ ಓಡಾಟಕ್ಕೆ ರಸ್ತೆ ಕಿತ್ತೋಗಿದೆ.