ತಾಲೂಕಿನ ಕಸಬಾ ಹೋಬಳಿಯ ಮಲಿಯಪ್ಪನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ನೇತೃತ್ವದಲ್ಲಿ ಮಂಗಳವಾರ ಮಧ್ಯಾಹ್ನ ಹಲವರು ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾದರು. ಕೋಮುಲ್ ನಿರ್ದೇಶಕ ಶ್ರೀನಿವಾಸ್, ನಿರ್ದೇಶಕಿ ಕಾಂತಮ್ಮಸೋಮಣ್ಣನವರ ಸಮ್ಮುಖದಲ್ಲಿ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮುಖಂಡರುಗಳಾದ ಮುನಿಶಾಮಣ್ಣ ಆನಂದ್, ಮುನಿಸ್ವಾಮಿ ಗೌಡ, ಆನಂದ್, ಮಹೇಶ್, ನಟರಾಜ್ ಸೇರಿದಂತೆ ಅನೇಕ ಮುಖಂಡರು ಕಾಂಗ್ರೆಸ್ ಪಕ್ಷದ ಸೇರ್ಪಡೆಯಾದರು.