ಸುಮುಖ ನಗರದ ಎಪಿಎಂಸಿ ಬಳಿ ಬೈಕ್ ವೀಲಿಂಗ್ ಮಾಡಿ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ಅಪ್ಲೋಡ್ ಮಾಡಿದ್ದ ಯುವಕನಿಗೆ ಶಿವಮೊಗ್ಗ ನ್ಯಾಯಾಲಯ ದಂಡಾವಧಿಸಿದ ತೇಜಸ್ ನಾಯ್ಕ್ ಎಂಬ ಯುವಕ ಬೈಕ್ ವೀಲಿಂಗ್ ಮಾಡಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ, ಸೋಶಿಯಲ್ ಮೀಡಿಯಾ ಗಮನಿಸಿದಂತಹ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ವಿಚಾರಣೆ ನಡೆಸಿದ ಶಿವಮೊಗ್ಗ ನ್ಯಾಯಾಲಯ ಯುವಕನಿಗೆ 12 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.